/Karnataka/Post office

Karadi Ayyanahali

2V32+FQM, Ayyanahalli, Karnataka 583219, India

Karadi Ayyanahali
Post office
4.6
8 reviews
8 comments
Orientation directions
Location reporting
Claim this location
Share
Monday: 00–24
Tuesday: 00–24
Wedneasday: 00–24
Thursday: 00–24
Friday: 00–24
Saturday: 00–24
Sunday: 00–24
Write a review
Ganesh D
Ganesh D
Good villege
M.D.kotresh M.D
M.D.kotresh M.D
Guddappa Y
Guddappa Y331 days ago
MB Hits
MB Hits2 years ago
Good
Basu M.S
Basu M.S2 years ago
✍️ ಬವರಾಜ.ಎಂ.ಎಸ್....🌷

ಹಳ್ಳಿ ತನ್ನದೇ ಆದ ಐತಿಹ್ಯ, ಸೌಂದರ್ಯ ,ಕೃಷಿ ಪ್ರಧಾನ್ಯತೆಗೆ ಅವಲಂಬಿತ, ಕರ್ನಾಟಕದ ಬಯಲು ಸೀಮೆಯ ಉತ್ತರ ಕರ್ನಾಟಕ ಭಾಗದ ಗತ ವೈಭವದಿ ಮೆರೆದ ವಿಜಯನಗರದ ಪಶ್ಚಿಮ ಭಾಗದಲ್ಲಿರುವ ಘಮಿಸುವ ಪರಿಮಳ ಬೀರುವ ದುಂಡು ಮಲ್ಲಿಗೆಯ , ಹೂವಿನ ಹಡಗಲಿಯ ತುಂಗಾ ಭದ್ರೆಯ ಪಂಪಾ ಸಾಗರದ ದಕ್ಷಿಣದ ಬಲನಾಲೆಗೆ ಹೊಂದಿಕೊಂಡಿರುವ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ಕುಗ್ರಾಮ ಇಂದಿಗೂ ಸಹ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಆ ಹಳ್ಳಿಯೇ ಕರಡಿ ಅಯ್ಯನಹಳ್ಳಿ

ಅಯ್ಯನಹಳ್ಳಿ ಗ್ರಾಮಕ್ಕೆ *ಕರಡಿ* ಎಂಬ ಪದದ ವ್ಯೂತ್ಪತ್ತಿಗೆ ಪೂರ್ವಜರ ಸಂಸ್ಕೃತಿ,ಪರಂಪರೆಯ ಯೊಂದಿಗಿನ ವಿಶಿಷ್ಠ ಕರಡಿಯ ಕುಣಿತವೇ ಅಯ್ಯನಹಳ್ಳಿಗೆ "ಕರಡಿ" ಅಯ್ಯನಹಳ್ಳಿ ಎಂದು ಹೆಸರು ಬರಲು ಕಾರಣಿಭೂತ ವಾಗಿರಬಹುದು

ನಮ್ಮ ಗ್ರಾಮದ ಇತಿಹಾಸ ಸ್ಪಷ್ಟ ಉಲ್ಲೇಖ ಇಲ್ಲದಿದ್ದರು ಮೌಖಿಕ ಪರಂಪರೆಯ ಓಭಿರಾಯನ ಕಾಲದ ಇತಿಹಾಸವನ್ನು ಒಂದು ಕ್ಷಣ ಕೇಳಿದಾಗ ,ಭೂತಪೂರ್ವ ಇತಿಹಾಸದ ಕೋಟೆಬಾಗಿಲಿಗೆ ಆಗಮನವ ಬಯಸುವುದು ಕ್ಷಣ ಮನ, ಕರ್ನಾಟಕದ ವಿಶಿಷ್ಠ ಸಂಸ್ಕೃತಿಯಲೊಂದು ಕರಡಿಯ ಕುಣಿತ ,

ನಮ್ಮೂರ ಆಸುಪಾಸಿಗೆ ಹೊಂದಿಕೊಂಡಂತೆ ಶಿಖರವೊಂದು ಅಸಾಧರಣವಾಗಿ ಇಂದು ಕಂಡರು
ದಟ್ಟ ಕಾನನವು ಅಂದು ಜಾಂಬವಂತನ ವಾಸಸ್ಥಾನಕ್ಕೆ ಯೋಗ್ಯ ವಾತಾವರಣವನ್ನು ಕಲ್ಪಿಸಿತ್ತು ಆದರೆ ಮಾನವನ ಆಸೆ, ಆಕಾಂಕ್ಷೆ, ಅತಿಶಯೋಕ್ತಿ ಹೆಚ್ಚಾದಂತೆ ಇಂದು ಕಾನನವೆಲ್ಲ ಅವನತಿಯ ಅಂಚು ತಲುಪಿ ಕುರುಚಲು ಹುಲ್ಲುಗಾವಲು ಇಂದು ದನಕರು ಮೇಯಲು ಮಾತ್ರ ಸೀಮಿತ ವಾಗಿರುವುದು ವಿಪರ್ಯಾಸವೇ ಸರಿ

ಕರಡಿಯ ಕುಣಿತ ಒಂದು ವಿಶಿಷ್ಠ ಮನೋರಂಜನೆ ಆಟವಾದರು ಆ ಆಟದ ಹಿಂದೆ ಮುಗ್ದ ಪ್ರಾಣಿಯೊಂದರ ಮಾನವನೊಂದಿಗಿನ ಬವರದ ವಿಲಕ್ಷಣದ ಸಂಗತಿಯನ್ನ ನಾವು ಕಾಣಬಹುದಿತ್ತು ಅದೇನೇ ಆದರೂ ಕರಡಿಯ ಕುಣಿತವು ಒಂದು ವಿಶಿಷ್ಠ ಮನೋರಂಜನೆಯಾದರು ನಮ್ಮೂರ ವಿಶಿಷ್ಠ ಸಂಸ್ಕೃತಿ ಪರಂಪರೆಗಳೊಂದಿಗೆ ಹಾಸುಹೊಕ್ಕು ಇಂದು ಕಾನೂನು ಕಟ್ಟಳೆಗಳ ವಿಚಾರವಾಗಿ ಅದು ತನ್ನ ಫಥ ಬದಲಾವಣೆಮಾಡಿ

ಇಂದು ದ,ರ,ಬೇಂದ್ರೆ ಯವರ ಸರಳ ಕವನ ಸಂಕಲಗಳಲ್ಲಿ ಕರಡಿಯ ಕುಣಿತವು ಒಂದಾಗಿದೆ ಈ ಕವನವನ್ನು ಓದುತ್ತ ಹೋದಂತೆ ಅಯ್ಯನಹಳ್ಳಿಯನ್ನು, ಕರಡಿ ಅಯ್ಯನಹಳ್ಳಿ ಏನ್ನುವ ನಮ್ಮ ಗ್ರಾಮದ ಐತಿಹ್ಯ ಅನುಭವೇದ್ಯ ವಾಗುವುದರಲ್ಲಿ ಯಾವುದೇ ನಿಸ್ಸಂಕೋಚವಿಲ್ಲ...

" ಕಬ್ಬಿಣದ ಕೈಗಡಗ ,ಕುಣಿಕೊಲು ಕೂದಲು
ಕಂಬಳಿ ಹೊಂದ್ದಾವಾ ಬಂದನಾ !
ಗುಣುಗುಣು ಗುಟ್ಟುತ್ತಾ ಕಡಗವ ಕಟ್ಟುತ್ತಾ
ಕರಡಿಯನಾಡಿಸುತ ನಿಂದನಾ !

ಯಾವ ಕಾಡಡವಿಯಲ್ಲಿ ಜೇನುಂಡು ಬೆಳೆದಿದ್ದ ತನ್ನsನ ತಾನನ ತಂದನಾ !
ಕುಣಿಯಲೇ ಮಗನೇ ಅನ್ನದೊಂದೆ ತಡ ತನ್ನsನ ತಾನನ ತಂದನಾ ,
ಮುದ್ದು ಕೂಸಿನ ಹಾಂಗ ಮುಸುಮುಸು ಮಾಡುತ್ತಾ
ಕುಣಿದಾನ ಕುಣಿತ್ನವ ಚಂದನಾ |

ಎಂಬ ಬೇಂದ್ರೆಯವರ ಈ ಸಾಲುಗಳು ಮಾತ್ರ ಮಾನವನ ಬುದ್ಧಿಯ ಕುಣಿತ ಎಲ್ಲ ಪ್ರಾಣಿಗಳಿಗಿಂತ ಮಿಗಿಲಾದದ್ದು ಎಂಬ ತತ್ವ ತೋರಿಸುವುದರ ಜೊತೆ ಜೊತೆಗೆ ಇನ್ನು ಕರಡಿ ಅಯ್ಯನಹಳ್ಳಿ ಗ್ರಾಮದ ಜ್ವಲಂತ ಇತಿಹಾಸಕ್ಕೆ ಕರಡಿಯ ಕುಣಿತವು ಇನ್ನು ಸಾಕ್ಷಿಯಾಗಬೇಕಾಷ್ಠೆ , ನಮ್ಮೂರ ಇತಿಹಾಸ ಮತ್ತೊಮ್ಮೆ ಮರುಕಳಿಸಲು.....

Basava m.s..💐
Paramesha P
Paramesha P2 years ago
Paramadh
Jagadish T
Jagadish T2 years ago
Dood Dood
Dood Dood2 years ago
Recommended locations